ಇಂಡಿಯನ್ ಗ್ರ್ಯಾಂಡ್ ಮುಫ್ತಿಯಿಂದ ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ನ ವೆಬ್ಸೈಟ್ ಲೋಕಾರ್ಪಣೆ
- KCF United Kingdom
- Jan 24, 2024
- 1 min read
Updated: Jan 27, 2024
ಮಂಗಳೂರು, ಜ. 24: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಹಲವು ಪ್ರಗತಿಪರ ಕೊಡುಗೆಗಳನ್ನು ಈ ನಾಡಿಗೆ ಸಮರ್ಪಿಸುತ್ತಾ ಬಂದಿದೆ. ಇದೀಗ ತನ್ನ ಮೂವತ್ತನೇ ಯಶಸ್ವೀ ವರ್ಷವನ್ನು ಆಚರಿಸುವ ಸುಯೋಗ, ಮಂಗಳೂರು ಅಡ್ಯಾರ್ ಕಣ್ಣೂರಿನ ಶಾ ಮೈದಾನವು ಪರಂಪರೆಯ ಪ್ರತಿನಿಧಿಗಳಾಗೋಣ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಈ ಮಹಾ ಸಮಾವೇಶಕ್ಕೆ ಇತಿಹಾಸ ಬರೆದಿದೆ. ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ನ ಎಲ್ಲಾ ವಿಧ ಅಭಿನಂದನೆಗಳನ್ನು ಸಮರ್ಪಿಸುತ್ತಿದ್ದೇವೆ.

ಈ ಸುವರ್ಣ ಸಂಧರ್ಭದಲ್ಲಿ ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ನ ವೆಬ್ಸೈಟ್ ಅನ್ನು ಸಮಸ್ತ ಜನಸಾಗರವನ್ನು ಸಾಕ್ಷಿಯಾಗಿಸಿ ಗ್ರ್ಯಾಂಡ್ ಮುಫ್ತಿ ಆಫ್ ಇಂಡಿಯಾ, ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ತನ್ನ ದಿವ್ಯ ಹಸ್ತದಿಂದ ಲೋಕಾರ್ಪಣೆ ಮಾಡಿದರು.
ಈ ಸಂಧರ್ಭದಲ್ಲಿ ಹಲವು ಸುನ್ನೀ ಸಾದತ್, ಉಲಮಾ, ಹಾಗೂ ಘಟಾನುಘಟಿ ನಾಯಕರುಗಳು ಉಪಸ್ಥಿತರಿದ್ದರು.

ಈ ಸುವರ್ಣ ಅವಕಾಶಕ್ಕೆ ಅನುವು ಮಾಡಿಕೊಟ್ಟ ಕರ್ಣಾಟಕ ರಾಜ್ಯ ಸುನ್ನೀ ಯುವಜನ ಸಂಘ ಹಾಗೂ ಸಹಕರಿಸಿದ ಕೆಸಿಎಫ್ ಇಂಟರ್ ನ್ಯಾಷನಲ್ ಕಮಿಟಿಯ ನಾಯಕರಿಗೆ ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಹೃದಯಾಂತರಾಳದ ವಂದನೆಗಳನ್ನು ಅರ್ಪಿಸುತ್ತಿದೆ.



Masha allah KCF UK
Masha allah, proud of KCF UK achievement