top of page
Search

ಕೆಸಿಎಫ್ ಯುಕೆ ಗ್ರ್ಯಾಂಡ್ ಇಫ್ತಾರ್ ಮೀಟ್ 2025 ಯಶಸ್ವಿ

ಲಂಡನ್, ಮಾರ್ಚ್ 14: ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಪ್ರತೀ ವರ್ಷ ಹಮ್ಮಿಕೊಳ್ಳುವಂತೆ ಈ ವರ್ಷದ ಬಹುನಿರೀಕ್ಷಿತ ಗ್ರ್ಯಾಂಡ್ ಇಫ್ತಾರ್ ಮೀಟ್ ಕಾರ್ಯಕ್ರಮವು ಬರ್ನೆಟ್ ಮಲ್ಟಿ-ಕಲ್ಚರಲ್ ಕಮ್ಯುನಿಟಿ ಸೆಂಟರ್, ಹೆಂಡನ್, ಲಂಡನ್ನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.


ree

ಈ ಕಾರ್ಯಕ್ರಮದಲ್ಲಿ ಆತ್ಮೀಯ ಮಜ್ಲಿಸ್, ಇಫ್ತಾರ್, ತರಾವೀಹ್ ನಮಾಜ್, ಹಾಗೂ ರಾತ್ರಿಯ ಔತಣ ಎಲ್ಲವನ್ನೂ ಒಳಗೊಂಡಿತ್ತು. ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಜನಸಂದಣಿ ಕೂಡಿತ್ತು ಮಾತ್ರವಲ್ಲ ಕಮ್ಯುನಿಟಿ ಸೆಂಟರ್ ಸಂಪೂರ್ಣವಾಗಿ ಸಭಿಕರಿಂದ ತುಂಬಿಹೋಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಬಹುಭಾಷಾ ವಾಗ್ಮಿ, ದೇಶ-ವಿದೇಶಗಳಲ್ಲಿ ಹೆಸರಾಂತ ಭಾಷಣಗಾರ ಉಸ್ತಾದ್ *ನೌಫಲ್ ಸಕಾಫಿ ಕಳಸ* ಅವರ ಮುಖ್ಯ ಪ್ರಭಾಷಣವು ನೆರೆದ ಜನರ ಮನ ತಲುಪುವಂತಿತ್ತು. ಹಲವಾರು ದೀನೀ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.


ree

ಕೆಸಿಎಫ್ ಯುನೈಟೆಡ್ ಕಿಂಗ್ಡಮ್‌ನ ರಾಷ್ಟ್ರೀಯ ಸಮಿತಿಯನ್ನು ಡಾ. ಹಕೀಂ ಅಜ್ಹರಿ ಉಸ್ತಾದ್ ಅವರು 2016ರಲ್ಲಿ ಘೋಷಿಸಿದ್ದರು. ಆದರೆ ಇಂದಿನ ಕಾರ್ಯಕ್ರಮದಲ್ಲಿ ಲಂಡನ್ ಈಶ್ಟ್ ಝೋನ್ ನ ಅಧಿಕೃತ ಘೋಷಣೆಯನ್ನು ನೌಫಲ್ ಸಕಾಫಿ ಕಳಸ ಉಸ್ತಾದ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಅವರನ್ನು ಕೆಸಿಎಫ್ ರಾಷ್ಟ್ರೀಯ ನಾಯಕರು ಸನ್ಮಾನಿಸಿ ಗೌರವಿಸಿದರು.


ree


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಗೂ ಉದ್ಘಾಟನೆಯನ್ನು ಅಬ್ದುಲ್ಲಾ ಬೈಕಂಪಾಡಿ , ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಅಧ್ಯಕ್ಷರು ವಹಿಸಿದರು. ಅದರ ನಿರ್ವಹಣೆ ಹಾಗೂ ಸ್ವಾಗತವನ್ನು ಕಾರ್ಯದರ್ಶಿ ಹನೀಫ್ ಮಾಡಿದರೆ, ಕೆಸಿಎಫ್‌ನ ಕೋಶಾಧಿಕಾರಿ ರಿಜ್ವಾನ್ ಖಾದರ್ ಅವರು ಧನ್ಯವಾದ ಸಮರ್ಪಣೆ ಮಾಡಿದರು.


ನೆರೆದ ಎಲ್ಲರಿಗೂ ಅಂದಿನ ರಾತ್ರಿಯ ಊಟ ಉಪಚಾರ ನೀಡಲಾಗಿತ್ತು. ತರಾವೀಹ್ ನಮಾಜಿನ ನಂತರ ಕಾರ್ಯಕ್ರಮವು ಮುಕ್ತಾಯಗೊಂಡಿತು.

 
 
 

Comments


bottom of page