top of page
Search

ಇಶಾರ ಲೈವ್ ಇನ್ನು ಮುಂದೆ ಬೆರಳ ತುದಿಯಲ್ಲಿ, ಲೋಕಾರ್ಪಣೆ ಮಾಡಿಕೊಟ್ಟ ಗ್ರ್ಯಾಂಡ್ ಮುಫ್ತಿ ಆಫ್ ಇಂಡಿಯಾ

ಮಂಗಳೂರು, ಜನವರಿ 24: ಮಕ್ಕಾದ ಪವಿತ್ರ ಜಬಲುನ್ನೂರ್ ನಲ್ಲಿ ಹತ್ತು ವರ್ಷಗಳ ಹಿಂದೆ ಬಿಡುಗಡೆ ಗೊಂಡು ಈಗ ಎಂಟು ವಿದೇಶ ರಾಷ್ಟ್ರಗಳಲ್ಲಿ ಓದುಗರನ್ನು ಹೊಂದಿರುವ ಹಾಗೂ ವಿದೇಶದಲ್ಲಿ ಮುದ್ರಣಗೊಳ್ಳುತ್ತಿರುವ ಏಕೈಕ ಕನ್ನಡ ಮಾಸಿಕ. ಕರ್ನಾಟಕ ಕಲ್ಚರಲ್ ಫೌಂಡೇಶನ್, ಕೆ.ಸಿ.ಎಫ್ ಇದರ ಮುಖವಾಣಿ ಗಲ್ಫ್ ಇಶಾರ. ಗಲ್ಫ್ ಇಶಾರವು ಇದೀಗ ಇಶಾರ ಲೈವ್ ಎಂಬ ಶೀರ್ಷಿಕೆಯೊಂದಿಗೆ ಡಿಜಿಟಲ್ ಲೋಕಕ್ಕೆ ಪಾದಾರ್ಪಣೆ ಮಾಡಿದೆ.



ಗ್ರ್ಯಾಂಡ್ ಮುಫ್ತಿ ಆಫ್ ಇಂಡಿಯಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಕಾಂತಪುರ ರವರು ಗಲ್ಫ್ ಇಶಾರದ ವೆಬ್ ಪೋರ್ಟಲನ್ನು ಮಂಗಳೂರಿನ ಅಡ್ಯಾರ್ ನಲ್ಲಿ ನಡೆದ ಸುನ್ನೀ ಯುವಜನ ಸಂಘ, ಎಸ್ ವೈ ಎಸ್ ಇದರ ಮೂವತ್ತನೇ ವಾರ್ಷಿಕ ಐತಿಹಾಸಿಕ ಸಮ್ಮೇಳನದಲ್ಲಿ ನೆರೆದ ಸಹಸ್ರ ಜನಸಾಗರದ ಸಮ್ಮುಖದಲ್ಲಿ ಚಾಲನೆ ನೀಡಿದರು.

ಇನ್ನು ಜಗತಿನಾದ್ಯಂತ ಕನ್ನಡಿಗರ ಬೆರಳ ತುದಿಯಲ್ಲಿ ಗಲ್ಫ್ ಇಶಾರದ ಆನ್ ಲೈನ್ ಆವೃತಿ ಲಭ್ಯವಾದಲಿದೆ.

ಕೆ.ಸಿ.ಎಫ್ ಇಂಟರ್ ನ್ಯಾಷನಲ್ ಕೌನ್ಸಿಲ್ ಇದರ ಪ್ರಕಾಶನ ಇಲಾಖೆ ನಮ್ಮೊಂದಿಗೆ ಈ ಸಂತಸವನ್ನು ಹಂಚುತ್ತಿದೆ.

ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲದ ನಿರೀಕ್ಷೆಯೊಂದಿಗೆ

 
 
 

Comments


bottom of page