ಕ್ಯಾನಿಂಗ್ ಟೌನ್; ಹೊಸ ಯುನಿಟ್ ಚಾಲ್ತಿಗೆ
- KCF United Kingdom
- Dec 17, 2023
- 1 min read

ಲಂಡನ್; ಡಿ17 ಶನಿವಾರ ಇಲ್ಲಿನ ಫೋರೆಸ್ಟ್ ಗೇಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಯುನಿಟ್ ಜಾರಿಗೆ ತರಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ಲಾ ಬೈಕಂಪಾಡಿ ವಹಿಸಿದರು. ಶಹೀದ್ ಮುಈನಿ ಖಿರಾಅತ್ ಪಠಿಸಿ ನೌಷಾದ್ ಮುಈನಿ ದುಆಗೈದರು. ಸಭೆಯನ್ನುದ್ದೇಶಿಸಿ ಹನೀಫ್ ಪೇರಿಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಹೊಸ ಯುನಿಟನ್ನು ಅಬ್ದುಲ್ಲಾ ಬೈಕಂಪಾಡಿ ಘೋಷಿಸಿದರು. ನೂತನ ಶಾಖೆಯ ಅಧ್ಯಕ್ಷರಾಗಿ ನೌಷಾದ್ ಮುಈನಿ, ಕಾರ್ಯದರ್ಶಿಯಾಗಿ ಶಹೀದ್ ಮುಈನಿ, ಕೋಶಾಧಿಕಾರಿ ಸ್ಥಾನಕ್ಕೆ ಝಿಯಾದ್, ಸ್ಟುಡೆಂಟ್ ವೆಲ್ಫೇರ್ ಸ್ಥಾನಕ್ಕೆ ಅರ್ಫಾಝ್ ಅಹ್ಮದ್, ನಾಲೆಡ್ಜ್ ವಿಭಾಗ ಸ್ಥಾನಕ್ಕೆ ಸಹಲ್ ಉಳ್ಳಾಲ ಇವರನ್ನು ಆಯ್ಕೆ ಮಾಡಲಾಯಿತು. ಅದರ ಬಳಿಕ ನೂತನ ಅಧ್ಯಕ್ಷರ ಮತ್ತು ಕಾರ್ಯದರ್ಶಿ ಮಾತು,ಕ್ಯಾನಿಂಗ್ ಟೌನ್ ಯುನಿಟ್ ಸರ್ಟಿಫಿಕೇಟ್ ಕೆ.ಸಿ.ಎಫ್ ಕಾರ್ಯದರ್ಶಿ ಫೈರೋಜ್,ಅಧ್ಯಕ್ಷರು ಅಬ್ದುಲ್ಲಾ ಬೈಕಂಪಾಡಿ ಸೇರಿ ಹೊಸ ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಗೆ ಹಸ್ತಾಂತರಿಸಿದರು.ಮಂಗಳೂರಿನಲ್ಲಿ ನಡೆಯಲಿರುವ ಕೆ.ಸಿ.ಎಫ್ ಹತ್ತನೇ ವಾರ್ಷಿಕ ಡಿಸೆನಿಯಂ ಕಾರ್ಯಕ್ರಮದ ಪೋಸ್ಟರ್ ಬಿಡುಗಮಾಡೂದರೊಂದಿಗೆ ಮೂರು ಸ್ವಲಾತ್ ಹೇಳಿ ಕಾರ್ಯಕ್ರಮ ಕೊನೆಗೊಳಿಸಿದರು.




Comments