ಕೆ.ಸಿ.ಎಫ್ ಯುಕೆ ಅಸ್ಸುಫ್ಫಾ ಇಸ್ಲಾಮಿಕ್ ಎಜುಕೇಶನ್ ಗೆ ಚಾಲನೆ:
- KCF United Kingdom
- Jan 13, 2024
- 1 min read
Updated: Jan 27, 2024
ಲಂಡನ್, ಜ. 13: ಕರ್ನಾಟಕ ಕಲ್ಚರಲ್ ಫೌಂಡೇಶನ್ ನ ಇಂಟರ್ನ್ಯಾಷನಲ್ ಕಮಿಟಿಯ ಆದೇಶದಂತೆ ವಿವಿಧ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಪುರುಷರಿಗೆ ಇಸ್ಲಾಮಿಕ್ ಧಾರ್ಮಿಕ ತರಗತಿಯಾಗಿದೆ ಅಸ್ಸುಫ್ಫಾ ಇಸ್ಲಾಮಿಕ್ ಎಜುಕೇಶನ್. ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಕೂಡಾ ಜನವರಿ 13 ರಂದು ಈ ಅಸ್ಸುಫ್ಫಾ ತರಗತಿಯ ಉದ್ಘಾಟನೆಯನ್ನು ಆನ್ಲೈನ್ ಮುಖಾಂತರ ನೆರವೇರಿಸಿತು.
ಕಾರ್ಯಕ್ರಮದ ಮೊದಲಿಗೆ ಕೆಸಿಎಫ್ ಐಸಿ ಇದರ ಶಿಕ್ಷಣ ವಿಭಾಗದ ಕಾರ್ಯದರ್ಶಿ ಸಯ್ಯದ್ ಆಬಿದ್ ತಂಗಲ್ ಎಮ್ಮೆಮಾಡು ದುಆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಕರ್ನಾಟಕ ಮುಸ್ಲಿಮ್ ಜಮಾತ್ ಇದರ ರಾಜ್ಯ ಕಾರ್ಯದರ್ಶಿ ಕೆ ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಮುಸ್ಲಿಮ್ ಜಮಾತ್ ಇದರ ರಾಜ್ಯ ಸದಸ್ಯರು ಬಹು ಜಿ ಎಂ ಕಾಮಿಲ್ ಸಖಾಫಿ ಅವರು ಅಸ್ಸುಫ್ಫಾ ಮೊದಲ ತರಗತಿಯನ್ನು ನಡೆಸಿ ಕೊಟ್ಟು ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು. ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಇದರ ಶಿಕ್ಷಣ ವಿಭಾಗದ ಕಾರ್ಯದರ್ಶಿ ನೌಶಾದ್ ಮುಈನಿ ತರಗತಿಯನ್ನು ಮುಂದುವರಿಸಿದರು.
ಸಂಘಟನೆಯ ಹಲವಾರು ಸದಸ್ಯರು ಹಾಗೂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕೆಸಿಎಫ್ ಯುಕೆ ಅಧ್ಯಕ್ಷರಾದ ಅಬ್ದುಲ್ಲಾ ಬೈಕಂಪಾಡಿ ಅವರು ಕಾರ್ಯಕ್ರಮದ ಅಧ್ಯ್ಷತೆಯನ್ನು ವಹಿಸಿಕೊಂಡರೆ, ಸಂಘಟನಾ ಕಾರ್ಯದರ್ಶಿ ಹನೀಫ್ ಪೇರಿಮಾರ್ ಸ್ವಾಗತಿಸಿ ಕಾರಯಕ್ರಮವನ್ನು ನಿರೂಪಿಸಿದರು, ಕೆಸಿಎಫ್ ಯುಕೆ ಇದರ ಕಾರ್ಯದರ್ಶಿ ಫೈರೋಜ್ ಕಬಕ ರವರು ನೆರೆದ ಎಲ್ಲರಿಗೂ ವಂದಿಸಿದರು. ಈ ತರಗತಿಯನ್ನು ಉನ್ನತ ಮಟ್ಟದಲ್ಲಿ ಮುಂದುವರಿಸಲು ಅಲ್ಲಾಹನು ತೌಫೀಕ್ ನೀಡಲಿ.




Comments